Tuesday, June 9, 2009

ಮರಳಿ ಮರೆಯಾಗಿ......ತೆರಳಿ ತೆರೆಯಾಗಿ......


ಅದೇಕೋ ಏನೋ ಇತ್ತೀಚಿಗೆ ಎಲ್ ಹೋದ್ರು ಈ ಮಧುರ ಹಾಡು humming ಮಾಡ್ತಾ ಇದೆ. ಆಫೀಸ್, ಬಸ್, ಕ್ಯಾಬ್, ರೇಡಿಯೋ, TV ಇನ್ನೆಲ್ಲೇ ಹಾಡು ಕೆಳ್ತಿದ್ರೂ ಈ ಹಾಡು ಮಧ್ಯದಲ್ಲಿ ನಂಗೊಂದು chance ಅಂಥ popup ಆಗಿಬಿಡುತ್ತೆ. ಆಗಂತ popup blocker use ಮಾಡಿ ಬೇರೆ ಕೆಲಸ ಮಾಡೋ ಬದಲು loop ಮಾಡಿ ಪುನಃ ಪುನಃ ಅದೇ ಹಾಡನ್ನ ಕೇಳೋ ಒಂದು ಪರಿ ಅಭ್ಯಾಸ ಆಗಿಬಿಟ್ಟಿದೆ. ಮೊದಲನೆ ಬಾರಿ ಈ ಹಾಡು ಕೇಳ್ದಾಗ ಅರೆರೆ ಇದ್ಯಾರೋ ನನ್ ಮನಸಿಂದ 2 ಸಾಲು ಕದ್ದು ಬಿಟ್ಟಿದ್ದರೆ ಅನಿಸ್ತು. ಆದ್ರೆ Raghu mukharji ನನ್ classmate ಆದ್ರಿಂದ ಅವ್ನೆ ಕಳ್ಳ ಅಂಥ ಸುಮ್ನಾದೆ. ಅವ್ನಿಗೆ ನನ್ನ ಪರಿಚಯ ನೆನಪಿರೋದು doubt ಆದ್ರೆ ಸ್ಕೂಲ್ ನಲ್ಲಿ ಅವ್ನು ನಾನು model ಆಗೇ ಆಗ್ತೀನಿ ಅಂತಿದ್ದ ಮಾತು ಇನ್ನು ನೆನಪಿದೆ. ಗುಡ್ ... he ಹಾಸ್ suceeded. ಅದೇ ಕಾರಣಕ್ಕೆ Movie ನು ನೋಡಿ ಬಿಟ್ಟೆ . Acting ಗ್ರೇಟ್ ಅಲ್ದಿದ್ದ್ರು ಬ್ಯಾಡ್ ಏನು ಅಲ್ಲ.
ಬಾನುವಾರ ಸಿನಿಮಾ ನೋಡಿ ಸೋಮವಾರ ಮತ್ತೆ ಆಫೀಸ್ ಮುಗಿಸೆ ಮನೆಗೆ ತೆರಳೋಕೆ change ಇರಲಿ ಅಂಥ BTS ಬಸ್ ಹತ್ತಿದೆ - ಸುಮಾರು 1 1/2 ವರ್ಷದ ನಂತರ. ಬಸ್ ನಲ್ಲಿ ಸೀಟ್ ಸಿಗದೇ ನಿಂತಿದ್ದಾಗ ಒಮ್ಮೆ ಹಾಗೆ argentina ದಲ್ಲಿ ಇದ್ದಾಗ ಕೂತಿದ್ದ ಸೀಟನ್ನು ಬೇರೆ ಅವರಿಗೆ ಬಿಟ್ಟು ಕೊಟ್ಟಾಗ ಅಲ್ಲಿನ ಜನ ಸ್ಮೈಲ್ ಮಾಡಿ ಗ್ರಾಸಿಯಾಸ್ (ಥ್ಯಾಂಕ್ಸ್ ) ಹೇಳ್ತಿದ್ದಿದು ನೆನಪಾಯ್ತು. ಒಮ್ಮೆ smile ಮಾಡಿದ್ದೆ.
ಬಸ್ ನಲ್ಲಿ ಸೆಕೆ ಇದ್ದ ಕಾರಣ ಕಿಟಕಿ open ಇದೆಯೋ ಇಲ್ವೋ ಅಂಥ ಒಮ್ಮ ನೋಡೋಕೆ ತಿರುಗಿದೆ. ಪಕದಲ್ಲೇ ನಿಂತಿದ್ದ ಒಂದು ಕಾರ್ ಇಂದ ಒಂದು ಪುಟ್ಟ ಹುಡುಗಿ ನನ್ ಕಡೆ ಕೈ ತೋರಿಸಿ ಟಾಟಾ ಮಾಡಿದ್ಲು. ಅದನ್ನ ನೋಡಿ ನಾನು ಟಾಟಾ ಮಾಡಿದಾಗ ಅವಳ ಮುಖದಲ್ಲಿ start ಆದ wonderful smile ನೋಡಿ ನಾನು ನನ್ನ ಸ್ಟಾಪ್ ಬಾರೋ ವರೆಗೂ smile ಮಾಡಿಕೊಂಡೆ ಬಂದೆ. ಪಕ್ದಲ್ಲೇ ನಿಂತಿದಿದ್ದ ಕೂತಿದ್ದ ಇತರರು ಕಾರಣ ತಿಳೀದಿದ್ರು ಆಟೋಮ್ಯಾಟಿಕ್ ಆಗಿ ಅವ್ರ ಮುಖದಲ್ಲೂ smile ತಂದು ಕೊಂಡು ಬಿಟ್ಟಿದ್ರು. ಹೀಗೆ BTS ನಲ್ಲಿ ಬಿಟ್ಟಿ smile ಮಾಡ್ತಾ ಮಾಡ್ತಾ smile ಇಸ್ contageous annodu prove ಮಾಡಿ ಬಿಟ್ಟೆ !!! innu BTS andre innu mundhe (BT - ಬಿಟ್ಟಿ, S - smile) ಅಂಥ ಅರ್ಥ ಮಾಡ್ಕೊತೀನಿ :)
ಹೀಗೆ ದಿನಕೊಂದು instance ನಲ್ಲಿ ಹಳೆ ನೆನಪುಗಳು ಬಂದಾಗ ಪುಟ್ಟ ಪುಟ್ಟ ಕ್ಷಣಗಳಲ್ಲಿ ಎಸ್ಟೊಂದು ಸಂತೋಷ ಇರುತ್ತೆ ಅಂಥ ಅರಿವಾಗ್ತಾ ಇರುತ್ತೆ. ಅದೇ ಗುಂಗಿನಲ್ಲಿ ಮತ್ತೆ ಮತ್ತೆ ........" ಮರಳಿ ಮರೆಯಾಗಿ...ತೆರಳಿ ತೆರಯಾಗಿ "ಸದ್ಯಕಂತೂ loop aagtha ನೆ ಇದೆ.
Youtube ನಲ್ಲಿ ಈ ಹಾಡಿಗೆ ಲಿಂಕ್ www.youtube.com/watch?v=PX7sJ2ZzHf4

No comments: